ಕೈಲಾಸಂರವರ ಪದ್ಯದ/ ಚುಟುಕದ ತುಣುಕೊಂದು ಹೀಗಿದೆ.
ಕಲ್ಲೇ- ಇದ್ದಿಲು
"ಕಲ್ಲಲ್ಲಿ ಸಿಗುವುದೇ ಕಲ್ಲಿದ್ದಿಲೆಂದೆನಿಸಿ
ಕಲ್ಲನ್ನು ಕೊರೆಯಲು--ಎಲ್ಲೆಲ್ಲಿ ಕೊರೆದರೂ
ಕಲ್ಲಲ್ಲದೊಂದಿಲ್ಲ ! ಬಲ್ಲೆ--
ಕಲ್ಲೇ ಇದ್ದಿಲೆಂದನಲ್ಪಜ್ಞ ".
--*--*
ಕೈಲಾಸಂ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಭಾಷಣದ ಕೊನೆಯಲ್ಲಿ ಹೇಳಿದ ಇಂಗ್ಲಿಷ್ ಕವನದ ಕನ್ನಡಾನುವಾದ ಹೀಗಿದೆ,

ಕಣ್ಣಹನಿ ಸನ್ಮಾನ
"ಹೊನ್ನೆ ? ಬಲ್ ಬಿರುದುಗಳೆ ? ಹಾಲುಗಲ್ ವಿಗ್ರಹವೆ ?
ಕವಿ ಬಯಸನಿಂಥದೇ ಪ್ರತಿಫಲವೆ ಬೇಕು !
ಹಿರಿಯರುಂ ಕಿರಿಯರುಂ ಕಿಲಕಿಲನೆ ನಕ್ಕೆರೆಡು
ಕಣ್ಣ ಹನಿಯಿತ್ತರೆನಗದು ಅನಿತೆ ಸಾಕು" !.
(ಕಣ್ಣ ಹನಿಯಿತ್ತರೆ+ ಎನಗೆ+ ಅದು ಅನಿತೆ ಸಾಕು")
(ಕಣ್ಣ ಹನಿ = ಆನಂದ ಭಾಷ್ಪ)

ಹಾಸ್ಯದ ಹರಿಗೋಲು
ಕಿರಿ ಆಳದ ತಿಳಿನೀರಿನ ಮೇಲೆ,
ತೇಲುತ ತಿರುಗುತ ಬಹುವೇಳೆ,
ಕಣ್ಣೀರಿನ ಕಡಲಿನ ಪಾಲು,
ತಿಳಿ ಹಾಸ್ಯದ ಹರಿಗೋಲು!
(ಹರಿಗೋಲು = ದೋಣಿ)
(ಎಲ್ಲವೂ ೧೯೪೦ ಕ್ಕೂ ಹಿಂದಿನ ಪ್ರಕಟಣೆಗಳು )
ಕೈಲಾಸಂ @ ನಂಜನಗೂಡು: ಮರೆತ ಅಧ್ಯಾಯದ ನೆನಪು;ಪದ್ಮಾ ಶ್ರೀರಾಮd: 18 ಸೆಪ್ಟೆಂಬರ್ 2016,
ಟಿ.ಪಿ.ಕೈಲಾಸಂ
ಕಭಿನೈ ಹಟಿಯಾ
“ಕಸರತ್ ಘಟಿಯಾ
ಕಭಿನೈ ಹಟಿಯಾ!
ಅಭಿತಕ್ ಪಹಿಲ್ವಾನ್
ಕಭಿನೈ ಹಟಿಯಾ!”…
ಕೈಲಾಸಂ ರವರ 'ಪೋಲಿಕಿಟ್ಟಿ' ನಾಟಕದಲ್ಲಿ ಕಿಟ್ಟಿಯ ಘೋಷಣೆ

ನೋಡಿ
ಟಿ.ಪಿ.ಕೈಲಾಸಂ ಸಾಹಿತ್ಯ
ಭಾವಗೀತೆಗಳು
ಪರಿವಿಡಿ

ಉಲ್ಲೇಖ

Category: ಭಾವಗೀತೆಗಳು
ವರ್ಗ: ಕನ್ನಡ ಸಾಹಿತ್ಯ